Friday, December 26, 2008

ಸರ್ವಾದಿಕಾರಿ ನರಿಯು, ಕುರಿಯು ನಾನದ ಕಥೆಯು....


ಅದೊಂದು ಬಹಳ ಬುದ್ದಿವಂತ ನರಿ. ಒಮ್ಮೆ ಆಹಾರವನ್ನು ಹುಡುಕಿಕೊಂಡು ಅದು ನಗರಕ್ಕೆ ಬರುತ್ತದೆ. ನರಿಯನ್ನು ಕಂಡ ನಗರದ ನಾಯಿಗಳು ನರಿಯನ್ನು ಅಟ್ಟಿಸಿಕೊಂಡು ಹೋಗುತ್ತವೆ, ನರಿಯು ಬೆಚ್ಚಿ ಬಿದ್ದು ಕಾಲಿಗೆ ಬುದ್ದಿ ಹೇಳುತ್ತಾ ಓಡಲು ಶುರು ಮಾಡಿ ಓಡಿ, ಓಡಿ ಒಬ್ಬ ಅಗಸನ ಮನೆಯನ್ನು ಪ್ರವೇಶಿಸುತ್ತದೆ, ಅದಕ್ಕೆ ದಿಗಿಲಾಗಿ , ಕಕ್ಕಾಬಿಕ್ಕಿಯಾಗಿ ಅಲ್ಲಿಯೇ ಇದ್ದ ಬಣ್ಣದ ತೊಟ್ಟಿಯಲ್ಲಿ ಬೀಳುತ್ತದೆ. ತೊಟ್ಟಿಯಲ್ಲಿದ್ದ ನೀಲಿ ಬಣ್ಣವೆಲ್ಲ ನರಿಯ ಮೈಗೆ ಹತ್ತಿ , ಅದು ನೀಲಿ ನರಿಯಾಗಿ ಹೊರ ಬರುತ್ತದೆ. ನರಿಯು ವಾಪಸ್ಸು, ತನ್ನ ಕಾಡಿಗೆ ಹೋದಾಗ , ಅಲ್ಲಿರುವ ಪ್ರಾಣಿಗಳೆಲ್ಲ ಅದನ್ನು ಕಂಡು ಆಶ್ಚರ್ಯ ಪಟ್ಟು ಇದ್ಯಾವುದೋ ಹೊಸ ಪ್ರಾಣಿಯ ಎಂದು ಅದನ್ನು ಪ್ರಶ್ನಿಸುತ್ತವೆ. ಇದೆ ಸರಿಯಾದ ಸಮಯವೆಂದು ನರಿಯು - " ನಾನು ದೇವ ಲೋಕದಿಂದ ಬಂದಿರುವ ದೇವ-ದೇವತೆಗಳ ಒಡೆಯನಾದ ಇಂದ್ರನ ಪ್ರತಿನಿಧಿ , ಈ ಕಾಡನ್ನು ರಕ್ಷಿಸಲು ಆ ಇಂದ್ರನೇ ನನ್ನನ್ನು ಈ ಕಾಡಿಗೆ ಕಳಿಸಿದ್ದಾನೆ "ಎಂದು ಬೊಗಳೆ ಬಿಡುತ್ತದೆ.

ಪಾಪ ಆ ಕಾಡಿನ ಮುಗ್ದ ಪ್ರಾಣಿಗಳು ನರಿಯ ಮಾತನ್ನು ನಂಬಿ, ನರಿಯು ಆ ಕಾಡಿನ ಸರ್ವಾದಿಕಾರಿಯ ಆಸನವನ್ನು ಏರಿ, ಸಿಂಹವನ್ನು ಪ್ರದಾನ ಮಂತ್ರಿಯನ್ನಾಗಿ, ಹುಲಿಯನ್ನು ತನ್ನ ಮಲಗುವ ಕೋಣೆಕಾವಲುಗಾರನನ್ನಾಗಿ ಹಾಗಿ ಆನೆಯನ್ನು ದ್ವಾರಪಾಲಕನನ್ನಾಗಿ ನೇಮಿಸಿ ನರಿಯು ತನ್ನ ಆಳ್ವಿಕೆಯನ್ನು ಪ್ರಾರಂಭ ಮಾಡುತ್ತದೆ. ಕಾಡಿನ ಪ್ರಾಣಿಗಳು ಬೇಟೆಯಾಡಿ ತಂದ ಬಲಿಗಳನ್ನು, ನರಿಯು ಸಮನಾಗಿ ಎಲ್ಲರಿಗೂ ಹಂಚಿ ರಾಜಧರ್ಮವನ್ನು ಪಾಲಿಸುತ್ತಿರುತ್ತದೆ. ಒಂದು ಸಲ ನರಿಯು ಗದ್ದುಗೆಯ ಮೇಲೆ ಆಸೀನವಾಗಿರುತ್ತದೆ, ಆ ವೇಳೆಯಲ್ಲಿ ನರಿಗಳ ಹಿಂಡೊಂದು ಸಮೀಪದಲ್ಲೇ ಹಾಡು ಹೋಗುತಿರುತ್ತವೆ. ಹಾಗೆ ಹೋಗುತ್ತಾ ಇರುವ ನರಿಗಳು ಜೋರಾಗಿ ಕೂಗುತ್ತಾ ಸಾಗುತ್ತಿರುತ್ತವೆ. ಈ ಕೂಗನ್ನು ಕೇಳಿ ರಾಜನಾಗಿದ್ದ ನರಿಗೆ ತಡೆದು ಕೊಳ್ಳಲಾಗದೆ, ಕೂಗಲಾರಂಭಿಸುತ್ತದೆ. ಆದರೆ ಗದ್ದುಗೆಯ ಮೇಲೆ ಕೂತಿದ್ದ ತನ್ನ ರಾಜನ ನಿಜ ಬಣ್ಣ ತಿಳಿದ ಕಾಡಿನ ಪ್ರಾಣಿಗಳು ನರಿಯು ಬಡಿದು, ಬಡಿದು ಸಾಯಿಸುತ್ತವೆ. ಈ ನೀತಿ ಕಥೆಯನ್ನು ಇಲ್ಲಿ ಬರೆಯಲ್ಲೂ ಇಷ್ಟೇ ಕಾರಣ- ನಮ್ಮ ಸುತ್ತ ಮುತ್ತ ಈ ನರಿಯ ಹಾಗೆ ಬಣ್ಣ ಬಳಿದು ಕೊಂಡು ಜನ ಕಾಣ ಸಿಗುತ್ತಾರೆ , ಅಂಥ ಒಂದು ನರಿಯ ಕೆಳಗೆ ನಾನು ಕೆಲಸ ಮಾಡುತಿದ್ದೆ ಎಂಬ ನೆನಪು ಬಂದ ಹಾಗೆ ಈ ಕಥೆಯನ್ನು ಇಲ್ಲಿ ಬರೆದು ಹಾಕುತ್ತಿದ್ದೇನೆ.

No comments: