Showing posts with label confidence. Show all posts
Showing posts with label confidence. Show all posts

Tuesday, December 30, 2008

ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...


ನೆನ್ನೆ ಕ್ಯಾಬ್ನಲ್ಲಿ ಆಫೀಸಿಗೆ ಬಂದು, ಕೈ ಗಡಿಯಾರ ನೋಡಿಕೊಂಡೆ. ಬರ್ರೋಬರ್ರಿ ೨೦ ನಿಮಿಷ ಬೇಗ ಬಂದಿದ್ದೆ. ನನ್ನ ಜಾಗಕ್ಕೆ ಬಂದು, ನನ್ನ ಲ್ಯಾಪ್-ಟಾಪ್ ಇಟ್ಟು, ಆಫೀಸಿನ ಹೊರಗೆ ಬಂದು, ಒಂದು ದಮ್ಮು ಹಚ್ಚಿ, ಆ ದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮನಸ್ಸಿನಲ್ಲಿಯೇ ಮಾಡಿಕೊಂಡು, ಇನ್ನೇನು ಆಫೀಸಿನ ಒಳಗೆ ಬರಬೇಕು, ಆವಾಗ ಒಬ್ಬ ೨೦-೨೨ ವಯಸ್ಸಿನ ಯುವಕ, ಇಂಗ್ಲೀಷು ಪದಕೋಶ ಹಿಡಿದು ಬಂದು ತೆಗೆದು ಕೊಳ್ಳುವಂತೆ ದುಂಬಾಲುಬಿದ್ದ. ಇಂಗ್ಲೀಷಿನಲ್ಲಿಯೇ ಮಾತನಾಡಲು ಪ್ರಾರಂಬಿಸಿದ ಅವನು, ಸ್ವಲ್ಪ ಸಮಯದ ನಂತರ, ಹಿಂದಿಯಲ್ಲಿ ಕೊನೆಗೆ ಹರುಕು ಹಿಂದಿ/ಇಂಗ್ಲೀಷು ಉಪಯೋಗಿಸಿ convince ಮಾಡಲು ಪ್ರಯತ್ನ ಮಾಡಿದ. ನಾನು "simply not convinced " ಎಂದು ಅವನ್ನನ್ನು ಸಾಗಹಾಕಿ ಆಫೀಸಿನ ಒಳಗೆ ಬಂದೆ.
ಬೆಂಗಳೂರಿನಂತಹ cosmopolitan/metropolitan ನಗರದಲ್ಲಿ, ಬಹುಬಾಷಾ channels/mediums ಬೇಕಾಗಬಹುದು. ಆದರೆ ಕನ್ನಡಿಗನಾಗಿ ನಾನು, ಶಾಲೆಯಲ್ಲಿ, ಕಾಲೇಜಿನಲ್ಲಿ ಕನ್ನಡ ಕಲಿತ ಪರಿಣಾಮವಾಗಿ, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಲು ಇಷ್ಟಪಡುತ್ತೇನೆ. ಇದೆ ಸಂದರ್ಬದಲ್ಲಿ ಪ್ರೌಡಶಾಲೆಯ ಸುಬ್ರಾಯ ಮೇಷ್ಟ್ರು ಹೇಳಿದ ಮಾತು ನೆನಪಿಗೆ ಬರುತ್ತದೆ - " ಮನು, ಮಾತೃ ಬಾಷೆಯಲ್ಲಿ ಇರುವ ಸ್ವಾತಂತ್ರ್ಯ, ಸೃಜನಶೀಲತೆ, ಯೋಚನಾ ಲಹರಿ, ಇಂಗ್ಲೀಷನ್ನು ಬಾಷೆಯಾಗಿ ಶಾಲೆಯಲ್ಲಿ ಕಲಿಯುವ ನಿನಗೆ, ಕಲಿತಿರುವ ನನಗೆ, ಇಂಗ್ಲೀಷು ಉಪಯೋಗಿಸುವಾಗ ಬರಲು ಸಾಧ್ಯವಿಲ್ಲ" ಎಂದರು. ಇದೆ ರೀತಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವಾಗ ಕ್ಲಾಸಿನಲ್ಲಿ - "ನೀವು ಎಲ್ಲರ ಜೊತೆ ಇಂಗ್ಲೀಷಿನಲ್ಲಿಯೇ ಮಾತನಾಡಬೇಕು, it will improve your confidence and reduce the vernacular way of speech/expression" ಎಂದು ಪ್ರೊ.ಪೂನಂ ನಾರಂಗ್ ಹೇಳಿದ ಮಾತು ಕೂಡ ನೆನಪಿದೆ.
ಇಬ್ಬರೂ ತುಂಬ ಕಲಿತವರೇ, ಇಬ್ಬರ ವಾದವೂ ಸರಿಯೇ, ವ್ಯವಹಾರಿಕ ಬಾಷೆಯಾಗಿ ಇಂಗ್ಲೀಷು ಉಪಯೋಗಿಸುವುದರಲ್ಲಿ ಯಾವ ಹಾನಿಯೂ ಇಲ್ಲ, ಆದರೆ ವ್ಯವಹಾರಿಕ ಬಾಷೆ ಮಾತೃ ಬಾಷೆಯ ಜಾಗ ತೆಗೆದುಕೊಳ್ಳೋ ರೀತಿ ಇಂಗ್ಲೀಷು ಪ್ರೀತಿ ನಮ್ಮ ಸುತ್ತಲುಬೆಳೆಯುತಿದ್ದೆ/ಬೆಳೆದಿದೆ . ಇಂತಹ ಬೆಳವಣಿಗೆ ಮಾರಕವಾಗುವ ಮುನ್ನ, mummy-daddy ಬಂದು ಅಪ್ಪ-ಅಮ್ಮ ಆಗುವ ಮುನ್ನ, ಆನೆ ಹೋಗಿ Elephant ಆಗುವ ಮುನ್ನ, ...ನಾವೆಲ್ಲರೂ ಜಾಗ್ರೃತವಾಗೋಣವೆ???