Thursday, December 4, 2008

ಮದನನ ಮರುನಾಮಕರಣ


ನನಗಾಗ ಸುಮಾರು ೬-೭ ವರುಷ ವಯಸ್ಸು , ಮೈಸೂರಿನಲ್ಲಿ ಅಜ್ಜಿ-ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿ ಬರುತ್ತಿದ್ದೆ, ಬೇಸಿಗೆಯ ರಜಾ ಮುಗಿದು, ಶಾಲೆ ಪ್ರಾರಂಭವಾದ ಎರಡನೇ ದಿನ, ಮೊದಲನೆ period ಮುಗಿದು, ಎರಡನೇ period ನಲ್ಲಿ ಲತಾ ಮಿಸ್ಸು, ಗಣಿತ ಪಾಠ ಮಾಡುತ್ತಲಿದ್ದರು , ಶಾಲೆಯ peon ಜೋಸೆಫ್ ಬಂದು, ಮಿಸ್ಸಿಗೆ ಒಂದು ಸಣ್ಣ ಚೀಟಿಯನ್ನು ಕೊಟ್ಟ. ಲತಾ ಮಿಸ್ಸು ಒಂದು ಕ್ಷಣ ಪಾಠ ನಿಲ್ಲಿಸಿ, ಚೀಟಿ ನೋಡಿ, ಮಕ್ಕಳ ಕಡೆ ತಿರುಗಿ- "Children, we have a new boy coming to our class and his name is Madan Chandrakant Kulkarni" ಎಂದೊಡನೆ, peon ಜೋಸೆಫ್ ಹಿಂಬದಿ ನಿಂತಿದ್ದ ಒಬ್ಬ ಹುಡುಗ, ಹೆದರುತ್ತ ಮುಂದೆ ಬಂದು ನಿಂತ. ಲತಾ ಮಿಸ್ಸು ಅವನ ಹತ್ತಿರ ಹೋಗಿ, "my child welcome to the school" ಅಂಥ ಹೇಳಿ, ಆ ಹುಡುಗನನ್ನು ಜಾಗ ನೋಡಿ, ನನ್ನ ಮುಂದಿನ ಬೆಂಚಿನಲ್ಲಿ ಕುಳಿತು ಕೊಳ್ಳ ಮಾಡಿದರು.

ಅವತ್ತು ಶಾಲೆ ಮುಗಿದು, ನಾನು ಮನೆಗೆ ಬೇರೆ ಗೆಳೆಯರೊಡನೆ ಹೊರಟೆ. ಮದನ ಕೂಡ ನಮ್ಮ ಜೊತೆ ಗೂಡಿ ಬಂದ,ಅವನು ಕೂಡ ನಮ್ಮ ಮನೆಯ ರಸ್ತೆಯಲ್ಲೇ, ಎಡ ಬದಿಯ ಮೂರನೇ ಮನೆಯಲ್ಲಿ ಬಾಡಿಗೆಗೆ ಅವರ ಸಂಸಾರ ಹುಬ್ಬಳ್ಳಿ ಇಂದ ಬಂದಿತ್ತು.ದಿನಗಳು ಕಳೆದ ಹಾಗೆ, ಮದನ ನನ್ನ ಸ್ನೇಹಿತರ ಗುಂಪಿನಲ್ಲಿ ಒಬ್ಬನಾದ. ಹೀಗೆ ಒಂದು ದಿನ ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿ, ಮನೆಯ ಹತ್ತಿರ ನಾನು, ಚೇತು ಮತ್ತು ಮದನ electrician ಕೆಂಪನ ಅಂಗಡಿಗೆ ಹೋಗಿ ಕಾಡಿ-ಬೇಡಿ ರೇಡಿಯೋ ಸ್ಪೀಕರ್ ಗಳಲ್ಲಿ ಸಿಗುವಂಥ ಒಂದು ಇಡಿ ಅಂಗೈ ಅಗಲದ magnet ಸಂಪಾದಿಸಿ ಯುದ್ಧ ಗೆದ್ದ ವೀರರಂತೆ ವಿಜಯೋತ್ಸವ ಆಚರಿಸುತ್ತಿರುವಾಗ, ಚೇತು "ಇದಕ್ಕೆ ರಸ್ತೆ ಮೂಲೆಯಲ್ಲಿರುವ ಇಮಾಂ ಸಾಬಿಯ cycle ಅಂಗಡಿಯ ನೆಲದ ಮೇಲೆ ಬಿದ್ದಿರುವ ballbearing ಚೆಂಡುಗಳು ಸಿಕ್ಕರೆ ಅದರ ಮಜಾನೆ ಬೇರೆ ಎಂದ", ಎಲ್ಲರೋ ಒಡಗೂಡಿ, ಇಮಾಂ ಸಾಬಿಯ ಕ್ಯ್ಕ್ಲೆ ಅಂಗಡಿಗೆ ಹೋಗಿ ಮತ್ತೆ ಕಾಡಿ- ಬೇಡಿ ಒಂದಸ್ತು ಉಕ್ಕಿನ ಗುಂಡುಗಳನ್ನು ಸಂಪಾದಿಸಿದೆವು. ಹೀಗೆ ಸಂಪಾದಿಸಿದ ಗುಂಡುಗಳನ್ನು, ಮನೆಗೆ ತಂದು, ನಿರ್ಮಾ ಪುಡಿ ಹಾಕಿ, ಪಳ ಪಳ ಹೊಳೆಯುವ ಹಾಗೆ ಮಾಡಿ, ಸ್ಪೀಕರ್ magnet ಗೆ ಅಂಟಿಸಿ ಕೊಂಡು ಆಟವಾಡುವಾಗ ಯಾವುದೊ ಒಂದು ಕ್ಷಣದಲ್ಲಿ ಒಂದು ಗುಂಡು ಮದನನ ಕಿವಿ ಹೂಕು ಕೂತು ಬಿಟ್ಟಿತು. ಮೊದಮೊದಲು ನಾನು, ಚೇತು ಕೂಡಿ ಅದನ್ನು magnet ಉಪಯೋಗಿಸಿ ತೆಗೆಯ ಪ್ರಯತ್ನ ಮಾಡಿದೆವು, ಅದು ಜಗ್ಗಲಿಲ್ಲ.ಕೊನೆಗೆ ಮದನನನ್ನು ಅವನ ಅಪ್ಪ, ಅಮ್ಮ ಕೂಡಿ ಎಂತ specalist ಹತ್ತಿರ ಕರೆದು ಕೊಂಡು ಹೋದರು .

ಅವರು ಅದನ್ನು ಒಂದು ಸಣ್ಣ ಗುಗ್ಗೆ ತೆಗೆಯುವ ಸಾಧನ ಉಪಯೋಗಿಸಿ ತೆಗೆದು, ಮದನನ ಬಲ ಕಿವಿಗೆ ಉಪಚಾರ ಮಾಡಿ ಕಿವಿ ಮುಚ್ಚುವ ಹಾಗೆ ಪಟ್ಟಿ ಬಿಗಿದರು. ಮದನ ಮುಂದಿನ ದಿನ ಶಾಲೆಗೆ ಬಂದಾಗ, ಒಂದು ಕಿವಿಯಲ್ಲಿ ಮಾತ್ರ ಕೇಳಿಸಿಕೊಳ್ಳನವನಾಗಿದ್ದ. ಲತಾ ಮಿಸ್ಸು ಅವನ್ನನ್ನು ಮುಂದಿನ ಬೆಂಚಿನಲ್ಲಿ ಕುಳ್ಳರಿಸಿ ಪಾಠ ಶುರು ಮಾಡಿದರು. ಮಧ್ಯಾನದ lunch ಬ್ರೇಕ್ ನಲ್ಲಿ baal bearing ಪುರಾಣ ಹೇಳಲು ಮಾಡಿ ಮದನ ಹೋಗಿ ಗೆಳೆಯರ ಬಳಗದಲ್ಲಿ BALL BEARING ಮದನ ಎಂದು ಕರೆಯಲ್ಪಡನಾದ.

No comments: