Monday, December 22, 2008

ಕಾಫಿ ಲುವಾಕ್ ಎಂಬ ದುಬಾರಿ ಕಾಫಿಯ ಸುತ್ತ....


ಇತ್ತೀಚಿಗೆ ನೋಡಿದ ಒಂದು ಆಂಗ್ಲ ಚಿತ್ರ ಒಂದರಲ್ಲಿ ("Bucket List") ಕಾಪಿಯ ಅತ್ಯಂತ ದುಬಾರಿಯಾದ ವಿದ "KopiLuwak" ನ ವರ್ಣನೆ ಇದೆ. ಕಾಫಿ ಇಲ್ಲದೆ ಹುಚ್ಚನಂಥಾಗುವ ನನಗೆ ಕೋಪಿ ಲುವಾಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಹಂಬಲ ಹಾಗೆ ಇತ್ತು. ನೆನ್ನೆ ಗೆಳೆಯ ಕರ್ಣ ಫೋನ್ ಮಾಡಿ - "ಮನು ಮಹಾರಾಜರೇ, ಕೋಪಿ ಲುವಾಕ್ ನ ಬಗ್ಗೆ ವಿಕಿಪೀಡಿಯದಲ್ಲಿ ವಿವರ ಪ್ರಕಟವಾಗಿದೆ, ದಯವಿಟ್ಟು ನೋಡಿ, ನೋಡಿದ ಮೇಲೆ ಕಾಫಿ ಕುಡಿಯುತೀರೊ ಇಲ್ಲವೊ, ನನಗೆ ತಿಳಿದಿಲ್ಲ, ಆದರೆ ನಿಮ್ಮ ಕಾಫಿ ಕುಡಿಯುವ ರೋಗಕ್ಕೆ/ಹವ್ಯಾಸಕ್ಕೆ ಕಡಿವಾಣ ಬೀಳುವುದು gurantee ಎಂದ", ನೋಡುವ ಎಂದು ಕರೆ ಕಟ್ ಮಾಡಿ, Kopi Luwak ಎಂದು google ಮಾಡಿದೆ, ನನ್ನ ಅಂತರ್ಜಾಲ ವಿಹಾರಿ ತಂದ ಮೊದಲ ಹುಡುಕಾಟ ತಂತಿ ಕಂಡು ಬೆರಗಾದೆ.


ಲೋಪಿ ಲುವಾಕ್ ಎಂಬುದು ಒಂದು ಬೆಕ್ಕಿನ ಜಾತಿ(civet cat)ಗೆ ಸೇರಿದ ಒಂದು ಪ್ರಾಣಿಯ Indirect Derivative. ಈ ಪ್ರಾಣಿಯುಇಂಡೋನೇಷ್ಯಾ, ಮಲೆಶೀಯಾದ ಅರಣ್ಯಗಳಲ್ಲಿ ಸಿಗುವ ಒಂದು ವಿರಳ ಬೆಕ್ಕು.ನೋಡಲು ಮುಂಗುಸಿಯ ಹಾಗೆ ಇರುವ ಒಂದು ಸಸ್ತನಿ, ಹಣ್ಣು, ಹಂಪಲು, ಗೆಡ್ಡೆಗಳನ್ನೂ ತಿಂದು ಬದುಕುವ ನಿರುಪದ್ರವಿ ಪ್ರಾಣಿ. ಕಾಫಿ ಹಣ್ಣುಗಳನ್ನು ತಿಂದು, ವಿಸರ್ಜಿಸುವ ಮಲದಲ್ಲಿ ಸಿಗುವ ಕಾಫಿ ಬೀಜಗಳನ್ನು ಹುರಿದು ಮಾಡುವ ಕಾಫಿ ಪುಡಿ ಎಂದು ತಿಳಿದು ಬಂತು.ಬೆಕ್ಕುಗಳು ತಾವು ವಿಹರಿಸುವ,ಜೀವಿಸುವ ಪ್ರಕೃತಿಯಲ್ಲಿ, ತಮ್ಮ ಗಡಿ ಗಳನ್ನೂ ಮಲ, ಮೂತ್ರ ವಿಸರ್ಜಿಸಿ ಗುರುತು ಮಾಡಿಕೊಳ್ಳುತವೆ . ಈ ವಿಧವಾಗಿ ವಿಸರ್ಜಿಸಿದ ಮಲವನ್ನು , ಅಲ್ಲಿನ ಬುಡಕಟ್ಟು ಜನ ಹೆಕ್ಕಿ ತಂದು, ತೊಳೆದು, ಬೀಜಗಳನ್ನು ಹುರಿದು,ಮಾಡಿದ ಕಾಫಿ ಪುಡಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.ಈ ರೀತಿ ಸಿಗುವ ಪುಡಿ ಇಂದ ಮಾಡುವ ಕಾಫಿಗೆ ನಾವು ದಿನ ನಿತ್ಯ ಕುಡಿಯುವ ಕಾಫಿಗಿಂತ ಭಿನ್ನವಾದ ಒಗರು ಮತ್ತು ತನ್ನದೇ ಆದ ಒಂದು ಪರಿಮಳ ಇರುತ್ತದೆ, ಇದರ ಬೆಲೆ ಒಂದು ಕಪ್ಪಿಗೆ ಕೇವಲ ೨೨೫೦ ರುಪಾಯಿ. ಇನ್ನು ಈ ಉದ್ಯಮ ಕೇವಲ ಇಂಡೋನೇಷ್ಯಾ, ಮಲೇಶಿಯಾ ದಲ್ಲಿ ಮಾತ್ರ ಪ್ರಚಲಿತ ಕಾರಣ - ಈ ಪ್ರಾಣಿ ಇಲ್ಲಿ ಮಾತ್ರ ಸಿಗುವುದು, ಮತ್ತು ಪ್ರತಿ ವರ್ಷ ಜಾಗತಿಕ ಮಾರುಕಟ್ಟೆಗೆ ಸರಾಸರಿ ೪೫೦ ಕಿಲೋ ಮಾತ್ರ ಸಪ್ಲೈ ಆಗುವುದು. ಜಪಾನ್ ಮತ್ತು ಅಮೆರಿಕದಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. "ಕೋಪಿ ಲುವಾಕ್" ಎಂಬ ಪೇಯಕ್ಕೆ ಇದಕ್ಕೂ ಮಿಗಿಲಾದ ವರ್ಣನೆ ಸಾದ್ಯವಿಲ್ಲದ ರೀತಿ ವರ್ಣಿಸಿರುವ ವಿಕಿಪೀಡಿಯಾ ಗೆ, ಕರೆ ಮೂಲಕ ವಿಷಯ ತಿಳಿಸಿದ ಗೆಳೆಯ ಕರ್ಣನಿಗೂ ದೊಡ್ಡ ನಮಸ್ಕಾರ ಮಾಡುತ್ತ, ಕಾಫಿ ಕುಡಿಯಲು ಅಮೃತ್ ಕಡೆ ಹೊರತ್ತಿದೇನೆ ...ಮತ್ತೆ ಸಿಗುವ.


No comments: