Friday, December 26, 2008

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು


ನನ್ನ ಆರ್ಕುಟ್ ಗೆ ತುಂಬ ದಿನಗಳು ಕಳೆದ ಮೇಲೆ ಲಾಗಿನ್ ಮಾಡಿದೆ . ನನ್ನ ಜೊತೆ ಓದಿದ ಕೆಲ ಓದಿದ ಕೆಲ ಗೆಳೆಯರನ್ನು ನಾನು ನನ್ನ HITLIST ಗೆ ಸೇರಿಸುತ್ತ, ಕೆಲವರ ಜಾಲವಾಡುತಿದ್ದೆ , ಆ ಕ್ಷಣದಲ್ಲಿ ಸಿಕ್ಕಿತು ನೋಡಿ ಅವನ ಪ್ರೊಫೈಲ್ .ಅವನನ್ನು ನಾನು ಎಂದೂ ಕ್ಷಮಿಸಲಾರೆ,ತಾಂತ್ರಿಕ ಶಿಕ್ಷಣ ನನ್ನ ಜೊತೆ ಓದಿ,ಉನ್ನತ ವ್ಯಾಸಂಗಕ್ಕೆ ಅಮೆರಿಕೆಗೆ ಹೋಗಿ,ಅಲ್ಲೇ ಕೆಲಸ ಪಡೆದು, ಅಲ್ಲಿಯೇ ನೆಲೆ ನಿಂತವ.ಕೆಲ ವರುಷಗಳ ಹಿಂದೆ ಭಾರತಕ್ಕೆ ವಾಪಸ್ಸು ರಜೆಯ ಮೇಲೆ ಬಂದಿದ್ದ.ವಿಮಾನ ನಿಲ್ದಾಣಕ್ಕೆ ಅವನ್ನನ್ನು ಬರ ಮಾಡಿ ಕೊಳ್ಳಲ್ಲು ನಾನು ಹೋಗಿದ್ದೆ.

ವಿಮಾನ ನಿಲ್ದಾಣ ದಿಂದ ಆಚೆ ಬಂದ ಮೇಲೆ ಶುರು ಮಾಡಿದ, ಅಮೇರಿಕಾದ ಗುಣಗಾನ ಅಲ್ಲಿನ ವ್ಯವಸ್ಥೆ,ರಸ್ತೆ,ಆರ್ಥಿಕ ತಾಕತ್ತು,ಅದು ಇದು ಅಂಥ.ಸ್ವಲ್ಪ ಹೊತ್ತು ನಾನು ಸುಮ್ಮನಿದ್ದೆ,ಅವನ ಈ ಗುಣ ನನಗೆ ಹೊಸತಾಗಿರಲಿಲ್ಲ. ವಿಮಾನ ನಿಲ್ದಾಣ ದಲ್ಲಿ ಆದ ಭದ್ರತಾ ತಪಾಸಣೆ ಇಂದ ಹಿಡಿದು,ವಾಹನ ದಟ್ಟಣೆ,ಮಾಲಿನ್ಯ ,corruption,ಪಾಲಿಟಿಕ್ಸ್ ಅದು ಇದು ಅಂಥ ಶುರು ಮಾಡಿದ ಭಾರತವನ್ನು ತೆಗಳಲು .ನನ್ನ ಪಿತ್ತ ನೆತ್ತಿಗೇರಿ ಹೋಯಿತು - "ಮಗನೆ, ಇನ್ನು ಒಂದು ಮಾತು ಆಡಿದರೆ ಇಲ್ಲೇ ರೋಡ್ ಮೇಲೆ ಹಾಕಿ ತುಳಿದು ಸಾಯಿಸ್ಬಿಡ್ತ್ಹೇನೆ. ಹುಟ್ಟಿದ್ದು ಇಲ್ಲಿ, ಓದಿದ್ದು ಇಲ್ಲಿ,ಬೆಳೆದಿದ್ದು ಇಲ್ಲಿ. ನಿನ್ನ ಅಪ್ಪ-ಅಮ್ಮ ಮತ್ತು ನಿನ್ನ ಸಂಪೂರ್ಣ ಕುಟುಂಬ ವರ್ಗ ಇರುವುದು ಇಲ್ಲಿ,ಈಗ ನಿನಗೆ ಡಾಲರ್ ಸಂಬಳ ಕೊಡೊ US job ಇರೋದ್ರಿಂದ, ಅಲ್ಲಿನ ವ್ಯವಸ್ಥೆ ಉತ್ತಮ ಆಗಿ ಹೋಯಿತಾ? ನನ್ ಮಗನೆ , ನಿನಗೆ ಇಂಡಿಯಾ ದಿಂದ ಅತಿಯಾದ ಪ್ರಾಬ್ಲಮ್ ಇದೆ ಅಂದ್ರೆ ವಾಪಸ್ಸು ಬರುವ ದರ್ದು ಯಾಕೆ? ಅಲ್ಲೇ ನಿನ್ನ ಅಮೆರಿಕಾಮ್ಮನ ಮಡಿಲಲ್ಲಿ-I'm for sale, ನನ್ನನ್ನು ದತ್ತು ತಗ್ಗೊಳ್ಲಿ ಅಂಥ ಫಲಕ ಹಾಕೊಂಡು ಬಿದ್ದಿರು" ಎಂದೆ .ಕಾರ್ ನಿಲ್ಲಿಸಿ ಅವನಿಗೆ ೧೦೦ ರೂಪಾಯಿ ಕೊಟ್ಟು, ಬಸ್ಸಿನಲ್ಲಿ ಮನೆಗೆ ಹೋಗು , ನಿನ್ನ ಅಮೆರಿಕಾಮ್ಮನ ಭೂತ ಇಳಿಯುತ್ತೆ eನಡೆ. ಅವನು ಅಂದಿನಿಂದ ನನ್ನನ್ನು ಮತ್ತೆ ಸಂಪರ್ಕಿಸಲು ಪ್ರಯತ್ನ ಮಾಡಲಿಲ್ಲ,ಆದರೆ ಅಮೆರಿಕೆಗೆ ವಾಪಸು ಹೋದ ಮೇಲೆ ನನ್ನ ಮೇಲೆ ಇಲ್ಲದ ಸಲ್ಲದ ಗೂಬೆ ಕೂರಿಸಿ ಅಲ್ಲಿರುವ ಇತರ ಗೆಳೆಯರಿಗೆ ಒಂದು ಮೇಲ್ ಮಾಡಿದ.ನನ್ನ ವಯುಕ್ತಿಕ ನಿಲುವನ್ನು ನೀವು ಕೇಳಿದರೆ ನನಗೆ ಯಾವ ಸಂಸ್ಕೃತಿಯು ಕೆಟ್ಟದಲ್ಲ,ಯಾವ ದೇಶವು ಕೆಟ್ಟದಲ್ಲ,ನೆಲ ಜಲಗಳು ಎಲ್ಲಿ ಹೋದರೂ ಮಾನವನನ್ನು ಪೊರೆದು ಬೆಳಸುತ್ತವೆ. ನಾನು short term assigments ಮೇಲೆ ಹೊರ ದೇಶಗಳಿಗೆ ಹೋಗಿ ಬರುವ ಅವಕಾಶಗಳು ಸಿಕ್ಕಿವೆ. ಅಲ್ಲಿನ ನೆಲ, ಜಲ, ಬಾಷೆ , ಸಂಸ್ಕೃತಿಗಳನ್ನು ಕಂಡು ನಿಬೆರಗಾಗ್ಗಿದೆ. ಬಹಳಷ್ಟು ಕಲಿಯುವ ಸದವಕಾಶ ಒದಗಿ ಬಂದಿದೆ,ಆದರ ನನ್ನ ದೇಶವನ್ನು ಅವುಗಳ ಮುಂದೆ ಎಂದು ತುಲನಾತ್ಮಕ ವಿಮರ್ಶಗೆ ಒರೆ ಹಚ್ಚಲಿಲ್ಲ-ಭಾರತದ ಬಗ್ಗೆ ನನಗೆ ಹೆಮ್ಮೆ,ಗೌರವ ಹೇಗಿದೆಯೋ, ಅದೇ ರೀತಿ ಬೇರೆ ದೇಶಗಳ ಬಗ್ಗೆಯೂ ಇದೆ.ಆದರೆ ನನ್ನ ಕೆಲ ಗೆಳೆಯರು ಇದಕ್ಕೆ ವಿರುದ್ಧವಾಗಿ ಅಲ್ಲಿನ ಸಂಸ್ಕೃತಿಯನ್ನು ಉತ್ತಮ ಎನ್ನುವುದು ನನಗೇಕೋ ಜೀರ್ಣ ಮಾಡಿಕೊಳ್ಳಲಾಗದ ತುತ್ತು. ನಿಜಾಂಶ ತಿಳಿಯದೆ ಅವರು ಮಾಡುವ ಪ್ರಮಾದದಿಂದ ಎಸ್ಟೋ ಬಾರಿ ನನ್ನ ಮನ ನೊಂದಿದೆ,ಇಂದೂ ನೋಯುತ್ತದೆ.ದೂರದಲ್ಲಿ ಎಲ್ಲೋ ಗೋಪಾಲ ಕೃಷ್ಣ ಅಡಿಗರ ಹಾಡು ಕೇಳಿಬರುತ್ತಿದೆ......


ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮನ್ನಿನ್ನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿರಿಂಗಣ
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದೂ ಇಲ್ಲಿಗೂ ಹಾಯಿತೆ
ವಿವಶವಾಯಿತು ಪ್ರಾಣ ಹ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕಯ್ಯನು
ಯಾವೆ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ

"america america " ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ಕಣ್ಣುಗಳ ಮುಂದೆ ಬಂದು ನಿಂತಿದೆ- ತನ್ನ ಗೆಳೆಯ ಶಶಾಂಕನಿಗೆ, ಸೂರ್ಯ ಹೇಳುವ ಮಾತು
- ನನ್ನ ಅಮ್ಮ ಹರುಕು ಸೀರೆ ಧರಿಸಿದ್ದಾಳೆ ಎಂದು, ರೇಷ್ಮೆ ಸೀರೆ ಧರಿಸಿದ ಬೇರೆ ಯಾರನ್ನೋ ಅಮ್ಮ ಎನ್ನಲಾಗದು. ಈ ನೆನಪಿನಲ್ಲೇ ಹೊರದೇಶದಲ್ಲಿ ನೆಲೆಸಿ ಭಾರತವನ್ನು ಆಗಸ್ಟ್ ೧೫ ರಂದೋ, ಅಥವಾ ಗಣ ರಾಜ್ಯೋತ್ಸವ ದಂದೋ, ಅಥವಾ ಭಾರತಿಯ ಹಬ್ಬಗಳನ್ನು ಆಚರಿಸುತ್ತಾ ನೆನೆದು ಅವರ ವ್ಯವಸ್ಥೆಉತ್ತಮ, ಭಾರತ ಇನ್ನು ಅನೆ, ಒಂಟೆ, ಎತ್ತಿನ ಗಾಡಿಯ ದೇಶ ವೆಂದು ಬಿಂಬಿಸುತ್ತಿರುವ ಎಲ್ಲ ಮಂಕು ದಿಣ್ಣೆ ದತ್ತು ಪುತ್ರ/ಪುತ್ರಿಯ ರಿಗೂ ಈ ಬ್ಲಾಗನ್ನು ಅರ್ಪಿಸುತ್ತಿದೇನೆ.

2 comments:

Savi-Ruchi said...

thumba thumba chennagide baravanige...i loved this...
heege munduvareyali..

Maverick said...

@ Sushma...

thamma anisikegalige dhanyavaadagalu....