Friday, December 26, 2008

ಸಿಂಹ ಮತ್ತು ನರಿಯ ಕಥೆ

ಅದೊಂದು ಮುದಿ ಸಿಂಹ. ಅದರ ಕಾಲುಗಳು ತ್ರಾಣ ಕಳೆದುಕೊಂಡಿವೆ. ಓಡಾಡಿ ಬೇಟೆಯಾಡಲು ಆಗುತ್ತಿಲ್ಲ. ಹಸಿವಿನ್ನಿಂದ ಅದರ ದೇಹ ದಿನದಿಂದ ದಿನಕ್ಕೆ ಕುಗ್ಗ ತೊಡಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಯುವುದು ನಿಶ್ಚಿತವೆಂದು ಸಿಂಹಕ್ಕೆ ಮನವರಿಕೆಯಾಗುತ್ತದೆ. ಆದರೇನಂತೆ ಅದು ಕಾಡಿನ ರಾಜ, ಅದರ ಆದೇಶವನ್ನು ಕಾಡಿನ ಪ್ರಾಣಿಗಳು ಪಾಲಿಸಲೇಬೇಕು . ಅದಕೊಂದು ಉಪಾಯ ಹೊಳೆಯಿತು ಕೂಡಲೇ ನರಿಯನ್ನು ಕರೆಸಿಕೊಂಡಿತು. " ನರಿ, ನೀನು ಬಹಳ ಚತುರ. ಹಾಗಾಗಿ ನಿನ್ನನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೊಂಡಿದ್ದೇನೆ" ಎಂದಿತು ಸಿಂಹ. ಮೊದಲೇ ಚತುರನಾದ ನರಿಯು ಸಿಂಹದ ಮಾತನ್ನು ನಂಬುವುದಿಲ್ಲ. ಆದರೆ ಸಿಂಹದ ಮಾತುಗಳನ್ನು ದಿಕ್ಕರಿಸುವ ಹಾಗು ಇಲ್ಲ, ಒಲ್ಲದ ಮನಸ್ಸಿನಿಂದ ನರಿಯು ಮಂತ್ರಿಯಾಗಲು ಓಪ್ಪಿಕೊಂಡಿತು. ಸಿಂಹಕ್ಕೆ ನರಿಯ ಒಪ್ಪಿಗೆ ಸಿಕ್ಕ ಮೇಲೆ ಖುಶಿಯಾಯಿತು.

"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.

ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.

1 comment:

ಡಿ. ಜಿ. ಸಂಪತ್ said...
This comment has been removed by a blog administrator.