Friday, November 27, 2009
Thursday, November 19, 2009
ಬೂದಿಯಿಂದ ಎದ್ದು ಬಂದ ತಾರೆ...
ಆರ್ಥುರ್ ಆಶ್ ಟೆನ್ನಿಸ್ ಕಂಡ ಮಹಾನ್ ಆಟಗಾರರಲ್ಲಿ ಒಬ್ಬ. ಏಡ್ಸ್ ರೋಗಕ್ಕೆ (ಹೃದಯ ಶಸ್ತ್ರ ಚಿಕಿತ್ಸೆಯ ವೇಳೆ, ದೂಷಿತ ರಕ್ತ ಪಡೆದ ಕಾರಣ) ತುತ್ತಾಗಿ ಸಾವಿನ ದವಡೆಯಲ್ಲಿ ನರಳುತ್ತಿದಾಗ, ಜಗತ್ತಿನ ಮೂಲೆ-ಮೂಲೆಗಳಿಂದ ಕ್ರೀಡಾಭಿಮಾನಿಗಳು ಆರ್ಥುರ್ ಆಶ್ ಗೆ ಪತ್ರ ಬರೆದು ಸಾಂತ್ವನ ಹೇಳಿದರು. ಅಂತ ಒಂದು ಪತ್ರದಲ್ಲಿ ಕ್ರೀಡಾಭಿಮಾನಿಯೊಬ್ಬರು - " ಆ ದೇವರು, ಅಂತಹ ಭಯಾನಕ ರೋಗವನ್ನು ನಿನ್ನಂತಹವನಿಗೆ ಏಕೆ ಕೂಟ್ಟ?" ಎಂಬ ಸಾರಉಳ್ಳ ಪತ್ರವನ್ನು ಬರೆದಿದ್ದರು. ಆದಕ್ಕೆ ಆರ್ಥುರ್ ಆಶ್ ಬರೆದ ಉತ್ತರ ಜೀವನದಲ್ಲಿ ಅವನಿಗಿದ್ದ ಮೌಲ್ಯಗಳು, ಮತ್ತು ಅವನ್ನು ಆರ್ಥುರ್ ಆಶ್ ಎತ್ತಿ ಹಿಡಿದ ರೀತಿಯನ್ನು ಬಿಂಬಿಸುತ್ತವೆ. ಆ ಪತ್ರದ ಸಾರಂಶ ಈ ಕೆಳಗೆ ಇದೆ -" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.
ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರಣ ಮಾಡಿದೆ.
Saturday, October 31, 2009
ಮತ್ತೆ ಬಂದಿದೆ ಕನ್ನಡಮ್ಮನ ಹಬ್ಬ....
Tuesday, December 30, 2008
ಕನ್ನಡಮ್ಮ ಇಂಗ್ಲೀಷು ಕುದುರೆಯ ಮೇಲೇರಿ ಬಂದಾಗ...

Friday, December 26, 2008
ಸಿಂಹ ಮತ್ತು ನರಿಯ ಕಥೆ
"ನೋಡು ನರಿ, ನಾನು ಸಿಂಹ, ಮೃಗರಾಜ , ನನಗೆ ದಿನವು ಬೇಟೆಯಾಡುವ ಅಗತ್ಯವಿಲ್ಲ, ನನ್ನ ಮಂತ್ರಿಯಾದ ನೀನು ಇನ್ನು ಮುಂದೆ ನನಗೆ ಒಂದು ಪ್ರಾಣಿಯನ್ನು ಒದಗಿಸಬೇಕು " ಎಂದನ್ನುತ್ತದೆ ಸಿಂಹ. ಬೇರೆ ದಾರಿಯೇ ಕಾಣದ ನರಿಯು ಬೇಟೆಯಾಡಲು ಕಾಡಿನೊಳಗೆ ಹೋಗುತ್ತದೆ. ದಾರಿಯಲ್ಲಿ ನರಿಗೆ ಒಂದು ಕೊಬ್ಬಿದ ಕತ್ತೆ ಸಿಗುತ್ತದೆ. ಕತ್ತೆ ಯನ್ನು ಕಂಡ ನರಿಯು " ಕಾಡಿನ ರಾಜನಾದ ಸಿಂಹವು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದೆ. ಅದಕ್ಕಾಗಿ ನಿನ್ನನ್ನು ಹುಡುಕುತಿದ್ದೆ " ಎಂದು ಹೇಳುತ್ತದೆ. ಸಿಂಹದ ಹೆಸರು ಕೇಳಿದ ಕತ್ತೆ ಗೆ ಹೆದರಿಕೆ ಶುರುವಾಗುತ್ತದೆ. ಅನುಮಾನವೂ ಶುರುವಾಗುತ್ತದೆ. "ಮುಖ್ಯಮಂತ್ರಿಯಾಗಲು ನಾನು ಯೋಗ್ಯನಲ್ಲ" ಎಂದು ನರಿಗೆ ಮಾರುತ್ತರ ನೀಡುತ್ತದೆ.
ನರಿ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಕತ್ತೆಯನ್ನು ಹೊಗಳಲು ಶುರು ಮಾಡುತ್ತದೆ, " ನೀನು ಬಹಳ ಬುದ್ದಿವಂತ, ಪರಿಶ್ರಮಿ, ಹಾಗಾಗಿಯೇ ನಿನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ" ಎಂದು ಮುಖಸ್ತುತಿ ಮಾಡುತ್ತದೆ. ನರಿಯ ಮಾತನ್ನು ಕೇಳಿದ ಕತ್ತೆಗೆ ನರಿಯ ಮಾತುಗಳ ಮೇಲೆ ನಂಬಿಕೆ ಬರುತ್ತದೆ. ಸಿಂಹದ ಬಳಿಗೆ ಹೋಗುತ್ತದೆ. ಆದರೆ ಸಿಂಹವು ಕತ್ತೆಯು ಹತ್ತಿರ ಬಂದೊಡನೆ ತನ್ನ ಬಲವಾದ ಮುಷ್ಟಿಯನ್ನು ಅಪ್ಪಳಿಸಿ ಕತ್ತೆಯನ್ನು ಕೊಳ್ಳುತ್ತದೆ, ನಂತರ ತಿನ್ನಲು ಅಣಿಯಾಗುತ್ತದೆ. ಇನ್ನೇನು ತಿನ್ನಬೇಕು ಎನ್ನುವಾಗ ನರಿಯು ಸಿಂಹವನ್ನು ಕಂಡು - " ಮಹಾರಾಜ, ನೀವು ಸ್ನಾನ ಮಾಡಿ ತುಂಬ ದಿನಗಳಾಗಿದೆ, ಸ್ನಾನ ಮಾಡಿ ಬಂದು, ಕತ್ತೆಯನ್ನು ತಿನ್ನಿ " ಎನ್ನುತ್ತದೆ. ನರಿಯ ಮಾತು ಸಿಂಹಕ್ಕೆ ಸರಿಯೆನಿಸುತ್ತದೆ. ಕತ್ತೆಯನ್ನು ಕಾಯುತ್ತಿರು ಎಂದು ನರಿಗೆ ಹೇಳಿ ಸ್ನಾನ ಮಾಡಲು ಹೋಗುತ್ತದೆ. ಇತ್ತ ವಿಧೇಯತೆ ಇಂದ ಕಾಯುತ್ತಿದ ನರಿಯ ಬಾಯಾಲ್ಲಿ ನೀರು ಬರಲು ಶುರುವಾಗುತ್ತದೆ. ಅಷ್ಟಕ್ಕೂ ಕತ್ತೆಯನ್ನು ಕರೆ ತಂದವನು ನಾನು, ಅದಕ್ಕೆ ಅದರ ದೇಹದ ಒಳ್ಳೆಯ ಬಾಗ ನನಗೆ ಸೇರಬೇಕು ಎಂದು ಕತ್ತೆ ಯಾ ಮೆದುಳನ್ನು ತಿಂದು ಮುಗಿಸುತ್ತದೆ. ಸ್ನಾನ ಮಾಡಿ ಬಂದ ಸಿಂಹಕ್ಕೆ ಏನೋ ವ್ಯತ್ಯಾಸವಾದಂತೆ ಬಾಸವಾಗುತ್ತದೆ. ಅನುಮಾನದಿಂದ ಪ್ರಶ್ನಿಸಿದಾಗ - " ಕತ್ತೆಗೆ ನೀನು ಕೊಟ್ಟ ಗುದ್ದಿನಿಂದ ಅದರ ನೆತ್ತಿ ಒಳಗೆ ಹೋಗಿದೆ" ಎನ್ನುತ್ತದೆ ನರಿ. ನರಿಯ ಉತ್ತರದಿಂದ ತೃಪ್ತನಾಗಿ ಸಿಂಹವು ಕತ್ತೆಯನ್ನು ತಿನ್ನಲು ಕೂತ ಸಿಂಹಕ್ಕೆ ಕತ್ತೆ ಯಾ ಮೆದುಳೇ ಮಯಾವಾಗಿರುವುದು ತಿಳಿಯುತ್ತದೆ. ಮತ್ತೆ ನರಿಯ ಕಡೆ ಅನುಮಾನದಿಂದ ನೋಡುತ್ತದೆ " ಒಂದು ವೇಳೆ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನಿನ್ನನ್ನು ಕಾಣಲು ಬರುತ್ತಿತ್ತೆ " ಸಿಂಹಕ್ಕೆ ಮರು ಪ್ರಶ್ನೆ ಹಾಕುತ್ತದೆ. ಮೆದುಳೇ ಇಲ್ಲದ ಮ್ಯಾನೇಜರ್ ಕೆಳಗೆ ಕೆಲಸ ಮಾಡೋ, ಅಥವಾ ನಮ್ಮ ಮೆದುಳೇ ಇಲ್ಲದ ಹಾಗೆ ಮಾಡುವ ಯಾಂತ್ರಿಕ ಕೆಲಸಕ್ಕೋ ಈ ಬ್ಲಾಗ್ ಸಮರ್ಪಿತ. ಮತ್ತೆ ಸಿಗುವವರೆಗೂ.....ಬೈ...ಹೊಸ ವರುಷದ ಶುಭಾಶಯಗಳು.
ಸರ್ವಾದಿಕಾರಿ ನರಿಯು, ಕುರಿಯು ನಾನದ ಕಥೆಯು....
