Thursday, November 19, 2009

ಬೂದಿಯಿಂದ ಎದ್ದು ಬಂದ ತಾರೆ...

ಆರ್ಥುರ್ ಆಶ್ ಟೆನ್ನಿಸ್ ಕಂಡ ಮಹಾನ್ ಆಟಗಾರರಲ್ಲಿ ಒಬ್ಬ. ಏಡ್ಸ್ ರೋಗಕ್ಕೆ (ಹೃದಯ ಶಸ್ತ್ರ ಚಿಕಿತ್ಸೆಯ ವೇಳೆ, ದೂಷಿತ ರ‍ಕ್ತ ಪಡೆದ ಕಾರಣ) ತುತ್ತಾಗಿ ಸಾವಿನ ದವಡೆಯಲ್ಲಿ ನರಳುತ್ತಿದಾಗ, ಜಗತ್ತಿನ ಮೂಲೆ-ಮೂಲೆಗಳಿಂದ ಕ್ರೀಡಾಭಿಮಾನಿಗಳು ಆರ್ಥುರ್ ಆಶ್ ಗೆ ಪತ್ರ ಬರೆದು ಸಾಂತ್ವನ ಹೇಳಿದರು. ಅಂತ ಒಂದು ಪತ್ರದಲ್ಲಿ ಕ್ರೀಡಾಭಿಮಾನಿಯೊಬ್ಬರು - " ಆ ದೇವರು, ಅಂತಹ ಭಯಾನಕ ರೋಗವನ್ನು ನಿನ್ನಂತಹವನಿಗೆ ಏಕೆ ಕೂಟ್ಟ?" ಎಂಬ ಸಾರಉಳ್ಳ ಪತ್ರವನ್ನು ಬರೆದಿದ್ದರು. ಆದಕ್ಕೆ ಆರ್ಥುರ್ ಆಶ್ ಬರೆದ ಉತ್ತರ ಜೀವನದಲ್ಲಿ ಅವನಿಗಿದ್ದ ಮೌಲ್ಯಗಳು, ಮತ್ತು ಅವನ್ನು ಆರ್ಥುರ್ ಆಶ್ ಎತ್ತಿ ಹಿಡಿದ ರೀತಿಯನ್ನು ಬಿಂಬಿಸುತ್ತವೆ. ಆ ಪತ್ರದ ಸಾರಂಶ ಈ ಕೆಳಗೆ ಇದೆ -

" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.

ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರ‍ಣ ಮಾಡಿದೆ.

Saturday, October 31, 2009

ಮತ್ತೆ ಬಂದಿದೆ ಕನ್ನಡಮ್ಮನ ಹಬ್ಬ....

ಎಲ್ಲ ಕನ್ನಡಾಭಿಮಾನಿಗಳಿಗೆ(ಭಾಷೆ ಬಂದರೂ ಮಾತನಾಡದ ದುರಭಿಮಾನಿಗಳಿಗೆ, ರಾಜ್ಯದಲ್ಲೇ ಇದ್ದರೂ ಭಾಷೆಯನ್ನು ಕಲಿಯದ ನಿರಭಿಮಾನಿಗಳಿಗೆ) ಕನ್ನಡ ರಾಜ್ಯೇತ್ಸವದ ಹಾರ್ದಿಕ ಶುಭಾಷಯಗಳು. ಕನ್ನಡದ ಕಂಪು, ನುಡಿ ಸಾಹಿತ್ಯದ ಇಂಪು ಪಸರಿಸುತ್ತಿರಲಿ, ಆ ಕನ್ನಡಾಂಬೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ರಾಜ್ಯೋತ್ಸವ ಕೇವಲ "ನವೆಂಬರ್ ಕನ್ನಡ" ದ ಆಚರಣೆಗೆ ಸೀಮಿತವಾಗಿರದೆ ಕನ್ನಡ ನಿತ್ಯೋತ್ಸವ ನಿತ್ಯವೂ ನಡೆಯಲಿ, ಜಾತಿ - ಮತ ಬೇಧವ ಮರೆತು ಎಲ್ಲರು ಸಶಕ್ತ ಕನ್ನಡ ನಾಡು - ನುಡಿಗಾಗಿ ಶ್ರಮಿಸೋಣ. ಜೈ ಕರ್ನಾಟಕ, ಜೈ ಕನ್ನಡಾಂಬೆ.

Sunday, October 11, 2009

ಒಂದು ಕವಿತೆಯ ಸುತ್ತ...

ಜಯನಗರ ೪ನೇ ಬ್ಲಾಕಿನ ಹಳೆಯ ಪುಸ್ತಕ ಮಳಿಗೆಯಲ್ಲಿ ಕೊಂಡ ಒಂದು ರಸಾಯನಶಾಸ್ತ್ರ ಪುಸ್ತಕದ ಕೊನೆಯ ಪುಟದಲ್ಲಿ ಸಿಕ್ಕ ಒಂದು ಹಿಂದಿ ಶಾಯರಿ/ ಕವಿತೆ. ಓದಿ, ಆನಂದಿಸಿ...

न ये chemistry होती, न ये chemistry होती,
न मैं student होता,न ये lab होता,
न ये accident होता, अभी practical में आयी नज़र एक लड़की ,
सुंदर थी नाक उसकी Test Tube जैसी,बातों मैं उसकी Glucose की मिठास थी ,
सांसों में Ester की खुशबु भी साथ थी,आंखों से झलकता था कुछ इस तरंह का प्यार,
बिन पिए ही हो जाता था Alcohol का खुमार,बेचैन सा होता था उसकी Presence का एहसास,
अंधेरे में होता था Radium का आभास,नज़रें मिलीं, Reaction हुआ कुछ इस तरह,
लव का Production हुआ ,लगने लगे उस के घर के चक्कर ,
ऐसे Nucleus के चरों तरफ़ Electron होए जैसे ,उस दिन हमारे Test का Confirmation हुआ,
अब उसके Daddy से हमारा Introduction हुआ,सुन कर हमारी बात वोह ऐसे उचल पड़े,
Ignition Tube में जैसे Sodium भड़क उठे ,वोह बोले होश में आओ पहचानो अपनी औकात,
Iron मिल नहीं सकता कभी Gold के साथ,ये सुन कर टुटा हमारे अरमानों भरा घर ,
और हम चुप रहे daddy की बत्तों का कड़वा घूँट पि कर,अब उस की यादों के सिवा हमारा कम चलता न था,
और लैब में हमारे दिल के सिवा कुछ और जलता न था,जिंदगी हो गयी Unsaturated Hydro carbon की तरह,
और हम फिरते हैं आवारा Hydrogen की तरह.

ಸುಮಾರು ದಿನಗಳಿಂದ ಏನನ್ನು ಪೋಸ್ಟ್ ಮಾಡದ ಕಾರಣ, ಇದನ್ನು ಪೋಸ್ಟ್ ಮಾಡಿದ್ದೇನೆ.

Monday, March 16, 2009

ನೂರು ಜನ್ಮಕೂ ನೂರಾರು ಜನ್ಮಕೂ...

ನಾನು ಮೆಚ್ಚಿದ ಹಾಡುಗಳಲ್ಲಿ ಒಂದು. ನೋಡಿ, ಕೇಳಿ ಆನಂದಿಸಿ...