
" ಜಗತ್ತಿನಾದ್ಯಂತ ೫೦ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಶುರು ಮಾಡುತ್ತಾರೆ, ಅದರಲ್ಲಿ ೫ ಮಿಲ್ಲಿಯನ್ ಮಕ್ಕಳು ಟೆನ್ನಿಸ್ ಆಡಲು ಕಲಿಯುತ್ತಾರೆ, ಅದರಲ್ಲಿ ೫೦೦೦೦೦ ಮಕ್ಕಳು ಸ್ಪರ್ಧಾತ್ಮಕ ಟೆನ್ನಿಸ್ ಕಲಿಯುತ್ತಾರೆ, ಅದರಲ್ಲಿ ೫೦,೦೦೦ ಮಕ್ಕಳು ವಿವಿಧ ಸ್ಪರ್ಧೆಗಳ್ಳಲ್ಲಿ ಅಡಲು ಬರುತ್ತಾರೆ, ಅದರಲ್ಲಿ ೫೦೦೦ ಮಕ್ಕಳು ಗ್ರಾಂಡ್ ಸ್ಲಾಮ್ ಸ್ಪರ್ಧೆಗಳಿಗೆ ಆಡಲು ಬರುತ್ತಾರೆ, ಅದರಲ್ಲಿ ೫೦ ಜನ ವಿಂಬಲ್ಡನ್ ಸ್ಫರ್ಧೆಗೆ ಬರುತ್ತಾರೆ, ೪ ಜನ ಸೆಮಿ- ಫೈನಲ್ ಗೆ ಬಂದು, ಅದರಲ್ಲಿ ೨ ಜನ ಫೈನಲ್ ಆಡುವ ಅವಕಾಶ ಪಡೆದು, ಗೆದ್ದ ಕಪ್ ಅನ್ನು ಎತ್ತಿ ಹಿಡಿದಾಗ " ದೇವರೆ, ಇದಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದೆ?" ಎಂದು ನಾನು ಎಂದೂ ಕೇಳದ ಕಾರಣ, ಇಂದು " ನನಗೆ ಇಂತಹ ರೋಗವನ್ನು ಏಕೆ ಕೊಟ್ಟೆ?" ಎಂದು ಏಕೆ ಕೇಳಲಿ.ಸಂತೋಷಗಳು ನಮ್ಮನ್ನು ಸಿಹಿಯಾಗಿಡುತ್ತವೆ, ಕಷ್ಟಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಡುತ್ತವೆ, ನೋವು ನಮ್ಮನ್ನು ಮಾನವನಾಗಿ ಇಡುತ್ತವೆ, ಸೋಲು ನಮ್ಮನ್ನು ಛಲವಂತರಾಗಿಸುತ್ತವೆ ಮತ್ತು ಗೆಲುವು ನಮ್ಮನ್ನು ಬಲವಂತರಾಗಿಸುತ್ತವೆ, ಆದರೆ ನಂಬಿಕೆ ಮತ್ತು ಛಲ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲೂ ಮುಂದೆ ಸಾಗಲು ನೆರವಾಗುತ್ತವೆ.
ಆರ್ಥ್ರ ಆಶ್ ಸುಮಾರು ೧೧ ವರ್ಷಗಳ ವೃತ್ತಿಪರ ಟೆನ್ನಿಸ್ ಆಡಿ ಹಲವಾರು ದಾಖಲೆಗಳನ್ನು ಸ್ತಾಪಿಸಿದ ಅದರಲ್ಲಿ ಪ್ರಮುಖವಾದದ್ದು ಮತ್ತು ಇನ್ನು ಅಜಯಿಯಾಗಿ ಉಳಿದಿರುವುದು - ವಿಂಬಲ್ಡನ್, ಯು.ಎಸ್. ಒಪನ್, ಆಸ್ಟ್ರೇಲಿಯನ್ ಒಪನ್ ಗೆದ್ದ ಏಕೈಕ ಆಫ್ರೋ-ಅಮೇರಿಕನ ಮೂಲದ ಆಟಗಾರ ಎಂದು. ಟೆನ್ನಿಸ್ ಆಟಕ್ಕೆ ಅರ್ಥುರ್ ಆಶ್ ನ ಕೊಡುಗೆ, ಅವನು ಮಾಡಿದ ಧರ್ಮಾಥ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟು ಯು.ಎಸ್ ಸರ್ಕಾರ , ಯು.ಎಸ್. ಒಪನ್ ಆಡುವ ಪ್ರಮುಖ ಕ್ರೀಡಾಂಗಣವನ್ನು " ಅರ್ಥುರ್ ಅಶ್ ಕ್ರೀಡಾಂಗಣ" ಎಂದು ನಾಮಕರಣ ಮಾಡಿದೆ.